ಎರುಕುಲ ದ್ರಾವಿಡ ಭಾಷೆಯಾಗಿದ್ದು, ಮುಖ್ಯವಾಗಿ ಎರುಕಲ ಬುಡಕಟ್ಟು ಜನಾಂಗದವರು ಮಾತನಾಡುತ್ತಾರೆ. ಈ ಭಾಷೆಯನ್ನು ಕುರ್ರು ಬಾಷ ಅಥವಾ ಕುಲವತ ಎಂದೂ ಕರೆಯುತ್ತಾರೆ. ಎರುಕಳವು ಭಾಷಾಶಾಸ್ತ್ರೀಯವಾಗಿ ದಕ್ಷಿಣ ದ್ರಾವಿಡ ಭಾಷೆಗಳಾದ ರವುಳ ಮತ್ತು ಇರುಳಕ್ಕೆ ಹತ್ತಿರದಲ್ಲಿದೆ. ಈ ಭಾಷೆಗಳಲ್ಲಿ ಪದಗಳ ಹೋಲಿಕೆಯು 53% ರಿಂದ 81% ವರೆಗೆ ಇರುತ್ತದೆ; ಇರುಳ ಸಂದರ್ಭದಲ್ಲಿ, ಇದು 33% ರಿಂದ 38% ವರೆಗೆ ಬದಲಾಗುತ್ತದೆ; ರವುಳದ ಸಂದರ್ಭದಲ್ಲಿ, ಇದು 28% ರಿಂದ 45% ವರೆಗೆ ಬದಲಾಗುತ್ತದೆ; ಆಧುನಿಕ ತಮಿಳಿನ ಸಂದರ್ಭದಲ್ಲಿ, ಇದು 27% ರಿಂದ 45% ವರೆಗೆ ಬದಲಾಗುತ್ತದೆ. == ಉಪಭಾಷೆಗಳು == ಎರುಕಳವು ಸಾಹಿತ್ಯೇತರ ದ್ರಾವಿಡ ಉಪಭಾಷೆಗಳಲ್ಲಿ ಒಂದಾಗಿದೆ. "ಸೆನ್ಸಸ್ ಆಫ್ ಇಂಡಿಯಾ 1891" ಈ ಕೆಳಗಿನ ಟಿಪ್ಪಣಿಗಳನ್ನು ನೀಡಿದ್ದಾರೆ; ಎರುಕಳದಲ್ಲಿ ‘ತಮಿಳಿನ ಮೂರು ಉಪಭಾಷೆಗಳನ್ನು ತೋರಿಸಲಾಗಿದೆ. ಅವುಗಳು; ಕೊರವ, ಇರುಳ ಮತ್ತು ಕಸುವ. ಆದರೆ ತಮಿಳಿನಲ್ಲಿ ವಿಭಿನ್ನ ಪ್ರಾಂತೀಯ ಪ್ರಭೇದಗಳು. ಇವು ಆಯಾ ಪ್ರದೇಶಗಳಿಗೆ ವಿಶಿಷ್ಟವಾದವು ಮತ್ತು ನಿರ್ದಿಷ್ಟ ಬುಡಕಟ್ಟು ಅಥವಾ ಜಾತಿಗಳ ಭಾಷೆಯಲ್ಲ; ಮತ್ತು ಅವರು ಈ ಭಾಷೆಯನ್ನು ತಮಿಳು ಎಂದೇ ಕರೆಯುತ್ತಾರೆ. == ಲಿಪಿಯ ಅಭಿವೃದ್ಧಿ == ಸಾತುಪತಿ ಪ್ರಸನ್ನ ಶ್ರೀಗಳು ಭಾಷೆಯೊಂದಿಗೆ ಬಳಸಲು ವಿಶಿಷ್ಟವಾದ ಲಿಪಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಎರುಕಲ ಭಾಷಾ ಲಿಪಿ ಇಂದ್ರಾಣಿ ಅಭಿವೃದ್ಧಿಪಡಿಸಿದ್ದಾರೆ. == ಸಂಬಂಧವಾಚಕ ಪದಗಳು == == ಅನುವಾದ ಸೇವೆ == ಯುಎಸ್ಎ ಯಲ್ಲಿ ಇಂಗ್ಲಿಷ್‌ನಿಂದ ಎರುಕುಲಕ್ಕೆ ಮತ್ತು ಎರುಕುಲದಿಂದ ಇಂಗ್ಲಿಷ್ ಭಾಷೆಗೆ ಜೊತೆಯಾಗಿ ವೃತ್ತಿಪರ ಅನುವಾದ ಸೇವೆಗಳನ್ನು ನೀಡುತ್ತದೆ. 100 ಕ್ಕೂ ಹೆಚ್ಚು ವಿವಿಧ ಭಾಷೆಗಳಿಗೆ ಅನುವಾದಿಸುವ ವಾಸ್ತವವಾಗಿ, ಎರುಕುಲವನ್ನು ಅಕ್ಷರಶಃ ಪ್ರಪಂಚದ ಯಾವುದೇ ಭಾಷೆಗೆ ಸಂಪೂರ್ಣವಾಗಿ ಭಾಷಾಂತರಿಸುವ ಮಾರುಕಟ್ಟೆಯಲ್ಲಿರುವ ಏಕೈಕ ಸಂಸ್ಥೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮುಖಪುಟ ಎರುಕಲ ಲಿಪಿ